ಅಮೆಜಾನ್ ಪ್ರೈಮ್ ವೀಡಿಯೋ ತಮಿಳು ಒರಿಜಿನಲ್ ಸೀರಿಸ್ ಸುಳಲ್ – ದ ವೊರ್ಟೆಕ್ಸ್ ನ ವರ್ಣರಂಜಿತ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ!
ಚೆನ್ನೈ 08 ಜೂನ್ 2022 ಅಮೆಜಾನ್ ಪ್ರೈಮ್ ವೀಡಿಯೋ ತಮಿಳು ಒರಿಜಿನಲ್ ಸೀರಿಸ್ ಸುಳಲ್ – ದ ವೊರ್ಟೆಕ್ಸ್ ನ ವರ್ಣರಂಜಿತ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ!
ಪುಷ್ಕರ್ ಮತ್ತು ಗಾಯತ್ರಿ ಅವರು ರಚಿಸಿರುವ, ಸುಳಲ್ – ದಿ ವೋರ್ಟೆಕ್ಸ್‌ನಲ್ಲಿ ರಾಧಾಕೃಷ್ಣನ್ ಪಾರ್ಥಿಬನ್ ಜೊತೆಗೆ ಕದೀರ್, ಐಶ್ವರ್ಯಾ ರಾಜೇಶ್, ಶ್ರೀಯಾ ರೆಡ್ಡಿ ಅವರು ನಟಿಸಿದ್ದಾರೆ. ಈ ಸೀರಿಸ್ ಭಾರತ ಮತ್ತು 240 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಜೂನ್ 17 ರಿಂದ ಸ್ಟ್ರೀಮ್ ಆಗಲಿದೆ
ವಾಲ್‌ವಾಚರ್ ಫಿಲ್ಮ್ಸ್ ನಿರ್ಮಾಣದ ಈ ಸೀರಿಸ್ ಅನ್ನು ಬ್ರಮ್ಮಾ ಮತ್ತು ಅನುಚರಣ್.ಎಂ ಅವರು ನಿರ್ದೇಶಿಸಿರುವ ಸುಳಲ್ – ದ ವೊರ್ಟೆಕ್ಸ್ ಪ್ರೈಮ್ ವೀಡಿಯೊದ ಮೊದಲ ತಮಿಳು ಒರಿಜಿನಲ್ ಸೀರಿಸ್ ಆಗಿದ್ದು, ಹಿಂದಿ, ಕನ್ನಡ, ಮಲಯಾಳಂ, ತೆಲುಗು ಮತ್ತು ಇಂಗ್ಲಿಷ್ ಸೇರಿದಂತೆ ಫ್ರೆಂಚ್, ಜರ್ಮನ್, ಇಟಾಲಿಯನ್, ಜಪಾನೀಸ್, ಪೋಲಿಷ್, ಪೋರ್ಚುಗೀಸ್, ಕ್ಯಾಸ್ಟಿಲಿಯನ್ ಸ್ಪ್ಯಾನಿಷ್, ಲ್ಯಾಟಿನ್ ಸ್ಪ್ಯಾನಿಷ್, ಅರೇಬಿಕ್ ಮತ್ತು ಟರ್ಕಿಶ್ ಭಾಷೆಗಳಲ್ಲಿ ಲಭ್ಯ. ಜೊತೆಗೆ ಇನ್ನುಳಿದ ವಿದೇಶಿ ಭಾಷೆಗಳಲ್ಲಿ ಸಬ್‌ಟೈಟಲ್‌ಗಳ ಜೊತೆಗೆ ಸೀರಿಸ್ ಲಭ್ಯವಿರುತ್ತದೆ.
ಅಮೆಜಾನ್ ಪ್ರೈಮ್ ಇತ್ತೀಚಿನ ಮತ್ತು ವಿಶೇಷ ಚಲನಚಿತ್ರಗಳ ಅನಿಯಮಿತ ಸ್ಟ್ರೀಮಿಂಗ್, ಟಿವಿ ಶೋಗಳು, ಸ್ಟ್ಯಾಂಡ್-ಅಪ್ ಕಾಮಿಡಿ, ಅಮೆಜಾನ್ ಒರಿಜಿನಲ್ಸ್, ಅಮೆಜಾನ್ ಪ್ರೈಮ್ ಮ್ಯೂಸಿಕ್ ಮೂಲಕ ಜಾಹೀರಾತು-ಮುಕ್ತ ಸಂಗೀತ ಆಲಿಸುವಿಕೆ, ಭಾರತದ ಅತಿದೊಡ್ಡ ಉತ್ಪನ್ನಗಳನ್ನು ಉಚಿತ ವೇಗದ ಡೆಲಿವರಿ ನೀಡುವಿಕೆ, ಅರ್ಲಿ ಆ್ಯಕ್ಸೆಸ್, ಟಾಪ್ ಡೀಲ್‌ಗಳು, ಪ್ರೈಮ್ ರೀಡಿಂಗ್‌ನೊಂದಿಗೆ ಅನಿಯಮಿತ ಓದುವಿಕೆ ಮತ್ತು ಪ್ರೈಮ್ ಗೇಮಿಂಗ್‌ನೊಂದಿಗೆ ಮೊಬೈಲ್ ಗೇಮಿಂಗ್ ಕಂಟೆಂಟ್ ಹೀಗೆ ನಂಬಲಾಗದ ಮೌಲ್ಯವನ್ನು ತನ್ನ ಸಬ್‌ಸ್ಕ್ರೈಬರ್‌ಗಳಿಗೆ ನೀಡುತ್ತದೆ. , ಇವೆಲ್ಲವೂ 1499 ರೂ.ಗಳ ವಾರ್ಷಿಕ ಸದಸ್ಯತ್ವಕ್ಕೆ ಲಭ್ಯವಿದೆ. ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಗೆ ಸಬ್‌ಸ್ಕ್ರೈಬ್ ಆಗುವ ಮೂಲಕ ಗ್ರಾಹಕರು ಸುಳಲ್ – ದಿ ವೋರ್ಟೆಕ್ಸ್ ಅನ್ನು ಸಹ ವೀಕ್ಷಿಸಬಹುದು. ಪ್ರೈಮ್ ವೀಡಿಯೊ ಮೊಬೈಲ್ ಆವೃತ್ತಿಯು ಏಕ-ಬಳಕೆದಾರ, ಮೊಬೈಲ್-ಮಾತ್ರ ಪ್ಲಾನ್ ಆಗಿದ್ದು, ಏರ್‌ಟೆಲ್ ಪ್ರಿಪೇಯ್ಡ್ ಗ್ರಾಹಕರಿಗೆ ಪ್ರಸ್ತುತ ಲಭ್ಯವಿದೆ.
ಚೆನ್ನೈ, ಜೂನ್ 7, 2022: ಪ್ರೈಮ್ ವಿಡಿಯೋ ಇಂದು ತನ್ನ ಮೊದಲ ಲಾಂಗ್-ಟರ್ಮ್ ಸ್ಕ್ರಿಪ್ಟೆಡ್ ಒರಿಜಿನಲ್ ಸೀರಿಸ್ ಟ್ರೇಲರ್ ಅನ್ನು ತಮಿಳಿನಲ್ಲಿ ಅನಾವರಣಗೊಳಿಸಿತು. ಇದರ ಹೆಸರು ಸುಳಲ್ – ದಿ ವೊರ್ಟೆಕ್ಸ್, ಇದು ಒಂದು ಕುರ್ಚಿಯ ತುತ್ತ-ತುದಿಗೆ ತಂದು ಕೂರಿಸುವಂತಹ ಥ್ರಿಲ್ಲರ್ ಸೀರಿಸ್ ಆಗಿದ್ದು, ಇದನ್ನು ಡೈನಾಮಿಕ್ ಜೋಡಿಯಾದ ಪುಷ್ಕರ್ ಮತ್ತು ಗಾಯತ್ರಿ ರಚನೆ ಮಾಡಿದ್ದಾರೆ. ಇದನ್ನು ಬ್ರಮ್ಮ ಮತ್ತು ಅನುಚರಣ್.ಎಂ ನಿರ್ದೇಶಿಸಿದ್ದಾರೆ. 8-ಎಪಿಸೋಡ್‌ಗಳ ಈ ಇನ್‌ವೆಸ್ಟಿಗೇಟಿವ್ ಡ್ರಾಮಾವು ಸಣ್ಣ ಕೈಗಾರಿಕಾ ಪಟ್ಟಣವೊಂದರಲ್ಲಿ ಶಾಲಾ ಬಾಲಕಿಯೊಬ್ಬಳು ಕಣ್ಮರೆಯಾದ ನಂತರ ನಡೆಯುವ ವಿನಾಶವನ್ನು ಉಂಟುಮಾಡುವಂತಹ ಘಟನೆಗಳ ಸುತ್ತ ನಡೆಯುವ ಆಸಕ್ತಿದಾಯಕ ಮತ್ತು ರೋಮಾಂಚಕ ಪ್ರಯಾಣ ಎಂದು ಭರವಸೆ ನೀಡುತ್ತದೆ. ಇದರಲ್ಲಿ ರಾಧಾಕೃಷ್ಣನ್ ಪಾರ್ಥಿಬನ್ ಜೊತೆಗೆ ಕದೀರ್, ಐಶ್ವರ್ಯ ರಾಜೇಶ್, ಶ್ರೀಯಾ ರೆಡ್ಡಿ ಮುಂತಾದವರು ನಟಿಸಿದ್ದಾರೆ. ಸುಳಲ್ – ದಿ ವೋರ್ಟೆಕ್ಸ್ ಹಿಂದಿ, ಕನ್ನಡ, ಮಲಯಾಳಂ, ತೆಲುಗು ಮತ್ತು ಇಂಗ್ಲಿಷ್ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಪ್ರೀಮಿಯರ್ ಆಗಲಿದೆ. ಇದರ ಜೊತೆಗೆ ಫ್ರೆಂಚ್, ಜರ್ಮನ್, ಇಟಾಲಿಯನ್, ಜಪಾನೀಸ್, ಪೋಲಿಷ್, ಪೋರ್ಚುಗೀಸ್, ಕ್ಯಾಸ್ಟಿಲಿಯನ್ ಸ್ಪ್ಯಾನಿಷ್, ಲ್ಯಾಟಿನ್ ಸ್ಪ್ಯಾನಿಷ್, ಅರೇಬಿಕ್ ಮತ್ತು ಟರ್ಕಿಶ್ ಮುಂತಾದ ವಿದೇಶಿ ಭಾಷೆಗಳಲ್ಲಿ ಸಹ ಇದು ಲಭ್ಯ. ಚೈನೀಸ್, ಜೆಕ್, ಡ್ಯಾನಿಶ್, ಡಚ್, ಫಿಲಿಪಿನೋ, ಫಿನ್ನಿಶ್, ಗ್ರೀಕ್, ಹೀಬ್ರೂ, ಹಂಗೇರಿಯನ್, ಇಂಡೋನೇಷಿಯನ್, ಕೊರಿಯನ್, ಮಲಯ್, ನಾರ್ವೇಯನ್ ಬೊಕ್ಮ್, ರೊಮೇನಿಯನ್, ರಷ್ಯನ್, ಸ್ವೀಡಿಷ್, ಥಾಯ್, ಉಕ್ರೇನಿಯನ್ ಮತ್ತು ವಿಯೆಟ್ನಾಮೀಸ್ ಸೇರಿದಂತೆ ಹಲವಾರು ವಿದೇಶಿ ಭಾಷೆಗಳಲ್ಲಿ ಈ ಸರಣಿಯು ಸಬ್‌ಟೈಟಲ್‌ಗಳ ಜೊತೆಗೆ ಲಭ್ಯವಿರುತ್ತದೆ. ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ 240 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಪ್ರೈಮ್ ಸದಸ್ಯರು ಸುಳಲ್ – ದಿ ವೋರ್ಟೆಕ್ಸ್ ಅನ್ನು 17ನೇ ಜೂನ್, 2022 ರಿಂದ ವೀಕ್ಷಿಸಬಹುದಾಗಿದೆ
ಸುಳಲ್ – ದ ವೊರ್ಟೆಕ್ಸ್ ತಮಿಳುನಾಡಿನ ಸಣ್ಣ ಪಟ್ಟಣವೊಂದರಿಂದ ಕಣ್ಮರೆಯಾಗುವ ಯುವತಿಯ ಕತೆಯೊಂದಿಗೆ ಪ್ರಾರಂಭವಾಗುತ್ತದೆ. ಕೇವಲ ಕಾಣೆಯಾದ ವ್ಯಕ್ತಿಗಳ ತನಿಖಾ ಡ್ರಾಮಾವಾಗಿ ಇದು ಪ್ರಾರಂಭವಾಗುತ್ತದೆ, ನಂತರ ಪ್ರತಿ ತಿರುವಿನಲ್ಲಿ ಒಂದು ಟ್ವಿಸ್ಟ್ ಮತ್ತು ಕಥೆಯ ಪ್ರತಿಯೊಂದು ಮೂಲೆಯಿಂದಲೂ ಕುತೂಹಲ ಕೆರಳಿಸುತ್ತಾ ಸಾಗುವ ಮೂಲಕ ಹೃದಯ ಬಡಿತವನ್ನು ಹೆಚ್ಚಿಸುವ ಥ್ರಿಲ್ಲರ್ ಆಗಿ ಇದು ಗಮನ ಸೆಳೆಯುತ್ತದೆ. ಇಡೀ ಪಟ್ಟಣ ಮತ್ತು ಅದರ ಸೂಕ್ಷ್ಮ ಸಾಮಾಜಿಕ ರಚನೆಯನ್ನು ಹರಿದು ಹಾಕುವ ಮಟ್ಟಿಗೆ ಈ ಕಣ್ಮರೆಯು ಬೆದರಿಕೆ ಹಾಕುತ್ತದೆ. ವಾರ್ಷಿಕ ಸಾಂಸ್ಕೃತಿಕ ಹಬ್ಬದ ಹಿನ್ನೆಲೆಯಲ್ಲಿ ಹೆಣೆಯಲಾದ ಈ ಸೀರಿಸ್ ಸುಳ್ಳು, ವಂಚನೆ ಮತ್ತು ಅನುಮಾನಾಸ್ಪದ ಪಾತ್ರಗಳ ಹಿಡನ್ ಅಜೆಂಡಾಗಳು ಮತ್ತು ಭಾವನೆಗಳ ರೋಲರ್‌ಕೋಸ್ಟರ್ ಮೂಲಕ ವೀಕ್ಷಕರನ್ನು ಅವರ ಆಸನಗಳ ತುತ್ತ ತುದಿಗೆ ಬಂದು ಕೂರುವಂತೆ ಮಾಡುತ್ತದೆ. ವೇಗದ ಚಿತ್ರಕಥೆ ಮತ್ತು ಕೆಲವರ ಅದ್ಭುತ ಅಭಿನಯಗಳಿಂದ ತುಂಬಿರುವ ಈ ಸೀರಿಸ್ ಪ್ರೇಕ್ಷಕರನ್ನು ಸಸ್ಪೆನ್ಸ್‌ನ ಸಮುದ್ರದಲ್ಲಿ ಮುಳುಗಿಸುತ್ತದೆ ಮತ್ತು ಇನ್ನು ಮುಂದೆ ಏನಾಗುತ್ತದೆ ಎಂದು ಉಗುರು ಕಚ್ಚುತ್ತಾ ನೋಡುತ್ತಾ ಕೂರುವಂತೆ ಮಾಡುತ್ತದೆ.
ಈ ಸೀರಿಸ್‌ನ ಮೊದಲ ನಾಲ್ಕು ಎಪಿಸೋಡ್‌ಗಳನ್ನು ನಿರ್ದೇಶಿಸಿರುವ ಬ್ರಮ್ಮಾ ಅವರು, “ಅಂತಿಮವಾಗಿ ನಮ್ಮ ಪ್ರೀತಿಯಿಂದ ಪಟ್ಟ ಶ್ರಮ ಪ್ರೇಕ್ಷಕರನ್ನು ತಲುಪಿರುವುದಕ್ಕೆ ಮನಸ್ಸಿಗೆ ಒಂದು ರೀತಿ ಮುದ ನೀಡುತ್ತಿದೆ. ನಾವು ಇದನ್ನು ಏಕೆ ನೋಡಬೇಕು ಎಂದರೆ ಕೆಲವೊಂದು ಅದ್ಭುತ ಪರ್ಫಾರ್ಮೆನ್ಸ್‌ಗಳು ಮತ್ತು ಪ್ರತಿ ಎಪಿಸೋಡ್‌ನಲ್ಲಿ ಎಲ್ಲರೂ ಏನಾಗುತ್ತದೆ ಮುಂದೆ ಎಂದು ಎದುರು ನೋಡುತ್ತಾ ಕೂರುವಂತಹ ನಿರೂಪಣೆಯನ್ನು ಇದರಲ್ಲಿ ಇಡಲಾಗಿದೆ. ಸುಳಲ್ – ದಿ ವೋರ್ಟೆಕ್ಸ್ ಒಂದು ವಿಭಿನ್ನ ಕಥಾ ನಿರೂಪಣೆಯ ಪ್ರಯತ್ನವಾಗಿದ್ದು ಅದು ವಿವಿಧ ಹಂತಗಳಲ್ಲಿ ಪ್ರೇಕ್ಷಕರ ಮನಸೂರೆಗೊಳ್ಳುವುದು ಖಚಿತ. ಒಂದು ಕರಾಳ ನಿಗೂಢತೆಯೊಂದಿಗೆ, ಸೀರಿಸ್‌ನ ಸನ್ನಿವೇಶಗಳು, ರೋಲರ್‌ಕೋಸ್ಟರ್‌ನ ರೀತಿಯಲ್ಲಿ ಪಾತ್ರ ಮತ್ತು ಪ್ರೇಕ್ಷಕರ ತಲೆಯಲ್ಲಿ ಏಕೆ, ಏನು, ಏನಾಗುತ್ತದೆ ಎಂಬ ಪ್ರಶ್ನೆಗಳನ್ನು ಹುಟ್ಟಿಸುತ್ತಾ ಸಾಗಿ, ಯಾವುದು ನಿಜ ಮತ್ತು ಯಾವುದು ಅಲ್ಲ ಎಂಬ ಆಲೋಚನೆಯಲ್ಲಿ ಮುಳುಗಿಸುತ್ತದೆ. ಪುಷ್ಕರ್ ಮತ್ತು ಗಾಯತ್ರಿ ಅವರೊಂದಿಗೆ ಸೇರಿ ಕೆಲಸ ಮಾಡುತ್ತಿರುವುದು ಒಂದು ಅದ್ಭುತ ಅನುಭವ. ಅದ್ಭುತವಾದ ವೀಕ್ಷಣೆಯ ಅನುಭವವನ್ನು ನೀಡುವ ಅವರ ದೃಷ್ಟಿಕೋನವನ್ನು ಹಂಚಿಕೊಳ್ಳಲು ನಾನು ಸಂತೋಷಪಡುತ್ತೇನೆ. ಅವರು ಇಲ್ಲಿಯವರೆಗೆ ತಮ್ಮ ಕೆಲಸದ ವಿಚಾರದಲ್ಲಿ ಅಪಾರ ಯಶಸ್ಸನ್ನು ಕಂಡಿದ್ದಾರೆ ಮತ್ತು ಸುಳಲ್ – ದಿ ವೋರ್ಟೆಕ್ಸ್‌ನೊಂದಿಗೆ ಅದೇ ರೀತಿ ಯಶಸ್ಸು ಅವರಿಗೆ ದೊರೆಯುತ್ತದೆ ಎಂದು ನಾವು ಭಾವಿಸುತ್ತೇವೆ. ನಾವು ನಿಜವಾಗಿಯೂ ಪ್ರೈಮ್ ವಿಡಿಯೋದಲ್ಲಿ ನಮ್ಮ ಸೀರಿಸ್ ಜಾಗತಿಕ ಪ್ರೀಮಿಯರ್ ಆಗುವುದನ್ನು ಎದುರು ನೋಡುತ್ತಿದ್ದೇವೆ ಮತ್ತು ಪ್ರಪಂಚದಾದ್ಯಂತ 240 ದೇಶಗಳು ಮತ್ತು ಪ್ರಾಂತ್ಯಗಳಲ್ಲಿನ ಜನರು ಹೇಗೆ ಪ್ರತಿಕ್ರಿಯೆ ಮಾಡುತ್ತಾರೆ ಎಂದು ಎದುರು ನೋಡುತ್ತಿದ್ದೇವೆ.
ಅನುಚರಣ್.ಎಂ ಸೀರಿಸ್‌ನ 5-8 ಎಪಿಸೋಡ್‌ಗಳನ್ನು ನಿರ್ದೇಶಿಸಿದ್ದಾರೆ. ಇವರ ಪ್ರಕಾರ “ಸುಳಲ್ – ದಿ ವೋರ್ಟೆಕ್ಸ್ ಮಾಡಲು ನನ್ನನ್ನು ಸಂಪರ್ಕಿಸಿದಾಗ, ನಿರೂಪಣೆಯ ವೇಗ ಮತ್ತು ಸಂಕೀರ್ಣತೆಯಿಂದ ತಕ್ಷಣವೇ ನಾನು ಇದನ್ನು ಮಾಡಲು ಒಪ್ಪಿದೆ. ಈವೆಂಟ್‌ಗಳ ಸೀಕ್ವೆನ್ಸ್ ಪ್ರೇಕ್ಷಕರನ್ನು ಸ್ಕ್ರೀನ್‌ಗೆ ಅಂಟಿಕೊಂಡು ಕೂರುವ ರೀತಿಯಲ್ಲಿ ರಚಿಸಲಾಗಿದೆ, ಪ್ರತಿ ಸೀನ್ ಅವರನ್ನು ಕುತೂಹಲಕ್ಕೆ ತಳ್ಳುತ್ತದೆ. ಥ್ರಿಲ್ಲರ್‌ನ ಈ ರೋಮಾಂಚಕಾರಿ ಸೀರಿಸ್ ಅನ್ನು ನಿರ್ಮಿಸಲು ಪುಷ್ಕರ್ ಮತ್ತು ಗಾಯತ್ರಿ ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ನಾನು ಕೃತಜ್ಞನಾಗಿದ್ದೇನೆ ಮತ್ತು ಥ್ರಿಲ್ಲರ್ ಪ್ರಕಾರದಲ್ಲಿ ಎದ್ದುಕಾಣುವಂತಹ ಈ ಕಥೆಯನ್ನು ಜೀವಂತಗೊಳಿಸಲು ಇಡೀ ತಂಡವು ಭಾರಿ ಪ್ರಯತ್ನಗಳನ್ನು ಮಾಡಿದೆ. ಸುಳಲ್ – ದಿ ವೋರ್ಟೆಕ್ಸ್ ಅನ್ನು ಪ್ರೈಮ್ ವಿಡಿಯೋದಲ್ಲಿ ಬಹು ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿ ಪ್ರಸ್ತುತಪಡಿಸಲಾಗುವುದು ಎಂದು ತಿಳಿಸಲು ನಾವು ಸಂತೋಷಪಡುತ್ತೇವೆ. ಇದು ಕಥೆಯನ್ನು ಒಂದೇ ಬಾರಿಗೆ ದೊಡ್ಡ ಮಟ್ಟದ ಪ್ರೇಕ್ಷಕರಿಗೆ ಕೊಂಡೊಯ್ಯಲು ಮತ್ತು ಅವರಿಗೆ ಮನರಂಜನೆ ನೀಡಲು ಮತ್ತು ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಈ ಸೀರಿಸ್‌ನಲ್ಲಿ ಸಬ್-ಇನ್‌ಸ್ಪೆಕ್ಟರ್ ಸಕ್ಕರೈಯವರ ಪಾತ್ರವನ್ನು ನಿರ್ವಹಿಸುತ್ತಿರುವ ಕದೀರ್ ಅವರು, “ಸುಳಲ್ – ದಿ ವೋರ್ಟೆಕ್ಸ್‌ನ ಭಾಗ ನಾನಾಗಿದ್ದೇನೆ ಎಂಬುದನ್ನು ಈಗಲೂ ನಂಬಲಾಗುತ್ತಿಲ್ಲ. ಇದು ನಿಮಗೆ ಒಂದು ಅದ್ಭುತವಾದ ಕಥೆಯನ್ನು ಹೇಳುತ್ತದೆ, ಅದು ನಿಮ್ಮನ್ನು ಮನರಂಜಿಸಲು ಮತ್ತು ನಿಮ್ಮ ಸೀಟ್‌ನ ತುದಿಯಲ್ಲಿ ಕುಳ್ಳಿರಿಸುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ. ಒಂದು ಕರಾಳ ರಹಸ್ಯವು ನಡುವೆ ಸಾಗುತ್ತಿರುವಾಗ, ಈ ಸೀರಿಸ್‌ನ ಪ್ರತಿ ಸೀನ್‌ನಲ್ಲಿ ತೀಕ್ಷ್ಣವಾದ ಟ್ವಿಸ್ಟ್‌ಗಳು ನಿಮ್ಮನ್ನು ಅಚ್ಚರಿಗೆ ದೂಡುತ್ತವೆ, ವೀಕ್ಷಕರು ಸಹ ಕಥೆಯ ಭಾಗವಾಗಿ ಏನಾಗುತ್ತಿದೆ ಮತ್ತು ಏನಾಗಬಹುದು ಎಂಬ ಪ್ರಶ್ನೆಗಳನ್ನು ಮಾಡುವುದು ಇಲ್ಲಿನ ವಿಶೇಷವಾಗಿರುತ್ತದೆ. ಒಂದು ತಂಡವಾಗಿ ಈ ಅದ್ಭುತ ಕಥೆಗೆ ಜೀವ ತುಂಬಲು ನಾವು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ನಾನು 240 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಸುಳಲ್ – ದಿ ವೋರ್ಟೆಕ್ಸ್ ಸೀರಿಸ್ ಪ್ರೈಮ್ ವಿಡಿಯೋದ ಮೂಲಕ ಪ್ರೀಮಿಯರ್ ಪ್ರದರ್ಶನಗೊಳ್ಳುವುದನ್ನು ನಾನು ಎದುರು ನೋಡುತ್ತಿದ್ದೇನೆ” ಎಂದು ಹೇಳಿದರು.
ಐಶ್ವರ್ಯಾ ರಾಜೇಶ್ ಅವರು ಈ ಸೀರಿಸ್ ಮೂಲಕ ಡಿಜಿಟಲ್ ಸೀರಿಸ್‌ಗೆ ಪ್ರವೇಶವನ್ನು ಮಾಡುತ್ತಿದ್ದಾರೆ, ಇದರ ಕುರಿತಾಗಿ ಅವರು “ನಟಿಯಾಗಿ, ನೀವು ಬಯಸುವ ಕಥೆಗಳಿವೆ ಮತ್ತು ಅದರ ಭಾಗವಾಗಲು ನೀವು ಹೆಮ್ಮೆ ಪಡುತ್ತೀರಿ. ಸುಳಲ್ – ದಿ ವೊರ್ಟೆಕ್ಸ್ ನನಗೆ ಅಂತಹ ಒಂದು ಅನುಭವವಾಗಿತ್ತು. ಅಂತಹ ಪ್ರತಿಭಾವಂತ ತಂಡ ಮತ್ತು ನಟರ ಅದ್ಭುತ ಸಮೂಹದೊಂದಿಗೆ ಕೆಲಸ ಮಾಡುವುದು ನಿಜವಾಗಿಯೂ ಒಳ್ಳೆಯ ಅನುಭವವನ್ನು ನೀಡಿತು. ಸೀರಿಸ್ ಸಣ್ಣ-ಪಟ್ಟಣದ ಪ್ರಕರಣವನ್ನು ಪ್ರತಿಬಿಂಬಿಸುವಾಗ, ಕಥೆಯು ಪ್ರಪಂಚದಾದ್ಯಂತದ ಪ್ರೇಕ್ಷಕರನ್ನು ಆಕರ್ಷಿಸುವ ಮತ್ತು ಅವರನ್ನು ಸ್ಕ್ರೀನ್‌ಗೆ ಅಂಟಿಕೊಂಡು ಕೂರುವಂತಹ ಅಂಶಗಳಿಂದ ಕೂಡಿದೆ. ಇದು ಒಂದು ರೋಮಾಂಚಕಾರಿ ಪ್ರಯಾಣವಾಗಿದೆ ಮತ್ತು ನಾವು ಹಸಿ ಹಸಿಯಾದ, ವಿಶ್ವಾಸಾರ್ಹ ಮತ್ತು ವಿಭಿನ್ನವಾದ ಕಥೆಯನ್ನು ನೀಡಲು ಸಾಧ್ಯವಾಯಿತಲ್ಲ ಎಂದು ನನಗೆ ಸಂತೋಷವಾಗುತ್ತಿದೆ. ಸುಳಲ್ – ದಿ ವೋರ್ಟೆಕ್ಸ್ ಯಾವಾಗಲೂ ನನಗೆ ವಿಶೇಷವಾದ ಸೀರಿಸ್ ಆಗಿರುತ್ತದೆ. ಏಕೆಂದರೆ ಇದು ನಂಬಲಾಗದ ಸೀರಿಸ್. ಆದರಲ್ಲೂ ನನ್ನ ಮೊದಲ ಡಿಜಿಟಲ್ ಸೀರಿಸ್ ಈ ರೀತಿಯದ್ದಾಗಿದೆ ಎಂಬುದು ಇನ್ನೂ ಖುಷಿ ಕೊಡುತ್ತಿದೆ” ಎಂದು ಹೇಳಿದರು.
ಇನ್ಸ್‌ಪೆಕ್ಟರ್ ರೆಜಿನಾ ಪಾತ್ರವನ್ನು ಮಾಡಿರುವ ಶ್ರೀಯಾ ರೆಡ್ಡಿ ಅವರು, “ಸುಳಲ್ – ದಿ ವೊರ್ಟೆಕ್ಸ್ ನಿಮಗೆ ಭಾವನೆಗಳು, ರೋಮಾಂಚನ, ಡ್ರಾಮಾ ಮತ್ತು ನಿಗೂಢತೆಯ ಸುಂಟರಗಾಳಿಯಲ್ಲಿ ತೇಲಾಡಿದ ಅನುಭವನ್ನು ನೀಡುತ್ತದೆ, ಇದು ಪ್ರೇಕ್ಷಕರನ್ನು ವಿಸ್ಮಯಗೊಳಿಸುತ್ತದೆ ಮತ್ತು ಕುತೂಹಲವನ್ನು ಕೆರಳಿಸುತ್ತಾ ಸಾಗುತ್ತದೆ. ಥ್ರಿಲ್ಲರ್ ಪ್ರಕಾರದ ಸೀರಿಸ್‌ಗಳಲ್ಲಿರುವ ಕ್ಲೀಷೆಗಳು ಮತ್ತು ಅದೇ ಹಳೆ ಪ್ರಕಾರದ ಕಥೆ ಹೇಳುವಿಕೆಯ ಶೈಲಿಯನ್ನು ಮೀರಿ ಹೋಗುವ ಉದ್ದೇಶದಲ್ಲಿ ಸುಳಲ್ ಒಂದು ಚೇತೋಹಾರಿ ಹಾಗೂ ಅದ್ಭುತ ಪ್ರಯತ್ನ ಮಾಡಿದೆ. ಇಂತಹ ಅದ್ಭುತ ಸೀರಿಸ್‌ನ ಭಾಗವಾಗಲು ನನ್ನಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ರಚನೆಕಾರರು ಮತ್ತು ನಿರ್ದೇಶಕರಿಗೆ ನಾನು ಕೃತಜ್ಞನಾಗಿದ್ದೇನೆ ಮತ್ತು ಇದನ್ನು ಚಿತ್ರೀಕರಿಸುವಾಗ ನಾವು ಎಷ್ಟು ಖುಷಿಪಟ್ಟೆವೋ, ಅಷ್ಟೇ ಖುಷಿಯನ್ನು ಪ್ರೇಕ್ಷಕರು ಇದನ್ನು ನೋಡುವಾಗ ಪಡುತ್ತಾರೆ ಎಂದು ನಾನು ಭಾವಿಸುತ್ತೇನೆ. ನಾನು ಸಂಪೂರ್ಣವಾಗಿ ಭರವಸೆ ನೀಡಬಲ್ಲ ಒಂದು ವಿಷಯವೆಂದರೆ ಈ ಸೀರಿಸ್ ಕೊನೆಯ ಕ್ಷಣದವರೆಗೂ ಎಲ್ಲರೂ ಏನಾಗಬಹುದು ಎಂದು ಊಹಿಸುತ್ತಾ ಕೂರುವಂತೆ ಮಾಡುತ್ತದೆ. ಆದ್ದರಿಂದ, ಉಗುರು ಕಚ್ಚುತ್ತಾ, ಖುರ್ಚಿಯ ತುತ್ತ ತುದಿಯಲ್ಲಿ ಕೂರುವ ಸನ್ನಿವೇಶಗಳಿಗಾಗಿ ಸಿದ್ಧರಾಗಿರಿ!” ಎಂಉ ಹೇಳಿದರು.
ಈ ಸೀರಿಸ್‌ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ರಾಧಾಕೃಷ್ಣನ್ ಪಾರ್ಥಿಬನ್ ಅವರು, “ನಾವು ಈ ಕಥೆಯ ಜೊತೆಗೆ ದೀರ್ಘಕಾಲ ಬದುಕಿದ್ದೇವೆ ಮತ್ತು ಉಸಿರಾಡಿದ್ದೇವೆ ಮತ್ತು ಅಂತಿಮವಾಗಿ ಪ್ರೇಕ್ಷಕರನ್ನು ಒಂದು ಅದ್ಭುತ ಅನುಭವದ ಭಾಗವಾಗಲು ಅವಕಾಶ ಮಾಡಿಕೊಡುತ್ತಿರುವುದು ನಿಜವಾಗಿಯೂ ಖುಷಿ ನೀಡುತ್ತಿದೆ. ಪುಷ್ಕರ್ ಮತ್ತು ಗಾಯತ್ರಿ ಜೊತೆಗೆ ನಿರ್ದೇಶಕರಾದ ಬ್ರಹ್ಮ ಮತ್ತು ಅನುಚರಣ್. ಎಂ ಅವರು ಈ ಸೀರಿಸ್‌ಗೆ ತುಂಬಾ ಕಷ್ಟಪಟ್ಟಿದ್ದಾರೆ ಮತ್ತು ಅದರ ಫಲವನ್ನು ನಾವು ನೀವೆಲ್ಲಾ ನೋಡಬಹುದು. ಕ್ರೆಡಿಟ್‌ಗಳು ರೋಲ್ ಆದ ನಂತರ ವೀಕ್ಷಕರ ಮನಸ್ಸಿನಲ್ಲಿ ಉಳಿಯುವ ಕಥೆಯನ್ನು ತಲುಪಿಸುವ ಮಹತ್ತರವಾದ ಕೆಲಸವನ್ನು ಇವರು ಮಾಡಿದ್ದಾರೆ. ಉದ್ಯಮದಲ್ಲಿ 40 ವರ್ಷಗಳನ್ನು ಕಳೆದ ನಂತರ, ಇಂತಹ ಅದ್ಭುತವಾದ ಸಹ-ನಟರು ಮತ್ತು ರಚನೆಕಾರರೊಂದಿಗೆ ಇಂತಹ ಸೀರಿಸ್ ಮೂಲಕ ನನ್ನ ಡಿಜಿಟಲ್ ಸೀರಿಸ್ ಅಭಿಯಾನವನ್ನು ಆರಂಭಿಸುತ್ತಿರುವುದು ನಿಜಕ್ಕೂ ಸಂತೋಷವನ್ನುಂಟು ಮಾಡಿದೆ. ನಾನು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಬಹು ಭಾಷೆಗಳಲ್ಲಿ ಬರುತ್ತಿರುವ ಈ ಸೀರಿಸ್‌ನ ಜಾಗತಿಕ ಪ್ರೀಮಿಯರ್‌ಗಾಗಿ ಎದುರು ನೋಡುತ್ತಿದ್ದೇನೆ. ಕಥೆಯ ತಿರುಳಿನ ಸಾರ್ವತ್ರಿಕ ಸ್ವರೂಪವನ್ನು ಗಮನಿಸಿದರೆ, ಇದು ಸಂಸ್ಕೃತಿಗಳು ಮತ್ತು ಪ್ರಪಂಚದಾದ್ಯಂತ ಇರುವ ಪ್ರೇಕ್ಷಕರಿಗೆ ಹಿಡಿಸುತ್ತದೆ ಎಂದು ನನಗೆ ನಂಬಿಕೆಯಿದೆ!” ಎಂದು ಹೇಳಿದರು.
XXX
Suzhal- The Vortex will join the thousands of TV shows and movies from Hollywood and Bollywood in the Prime Video catalogue. These include Indian-produced Amazon Original series Modern Love Mumbai, Mumbai Diaries, The Family Man, Comicstaan Semma Comedy Pa, Breathe: Into The Shadows, Bandish Bandits, Paatal Lok, Tandav, Mirzapur Season 1 & 2, The Forgotten Army – Azaadi Ke Liye, Sons of the Soil: Jaipur Pink Panthers, Four More Shots Please, Made In Heaven, and Inside Edge, Indian films such as Coolie No. 1, Gulabo Sitabo, Durgamati, Chhalaang, Shakuntala Devi, Ponmagal Vandhal, French Biriyani, Law, Sufiyum Sujatayum, Penguin, Nishabdham, Maara, V, CU Soon, Soorarai Pottru, Bheema Sena Nala Maharaja, Drishyam 2, Halal Love Story, Middle Class Melodies, Putham Pudhu Kaalai, Unpaused among others and the award-winning and critically acclaimed global Amazon Originals like Borat Subsequent Moviefilm, Tom Clancy’s Jack Ryan, The Boys, Hunters, Fleabag, and The Marvelous Mrs. Maisel. All this is available at no extra cost for Amazon Prime members. The service includes titles in Hindi, Marathi, Gujarati, Tamil, Telugu, Kannada, Malayalam, Punjabi, and Bengali.
Prime members will be able to watch the series anywhere and anytime on the Prime Video app for smart TVs, mobile devices, Fire TV, Fire TV stick, Fire tablets, Apple TV, etc. In the Prime Video app, Prime members can download episodes on their mobile devices and tablets and watch anywhere offline at no additional cost. Prime Video is available in India at no extra cost with Prime membership for just ₹1499 annually or ₹179 monthly, new customers can find out more at www.amazon.in/prime and subscribe to a free 30-day trial.











