Thursday, July 29
Shadow

ಭಾರತದಲ್ಲಿ ಸಿನಿಮಾ ನಿರ್ಮಾಣಕ್ಕೆ ಕಾಲಿಟ್ಟ ಅಮೆಜಾನ್ ಪ್ರೈಮ್ ವೀಡಿಯೋ: ಅಕ್ಷಯ್‌ ಕುಮಾರ್‌ ನಟನೆಯ ರಾಮ್‌ ಸೇತು ಸಹ ನಿರ್ಮಾಣ.

Chennai 17 March 2021

ಈ ನಡೆಯಿಂದ ಭಾರತದ ಶ್ರೀಮಂತ ಸಂಸ್ಕೃತಿಯನ್ನು 240 ಕ್ಕೂ ಹೆಚ್ಚು ದೇಶಗಳಿಗೆ ಪಸರಿಸುವ ಮಹತ್ವದ ಹೆಜ್ಜೆಯನ್ನು ಪ್ರೈಮ್ ವೀಡಿಯೋ ಇಟ್ಟಿದೆ

ಕೇಪ್‌ ಆಫ್‌ ಗುಡ್ ಫಿಲಮ್ಸ್‌, ಅಬಂಡನ್ಶಿಯಾ ಎಂಟರ್ಟೇನ್‌ಮೆಂಟ್, ಲೈಕಾ ಪ್ರೊಡಕ್ಷನ್ಸ್‌ ಮತ್ತು ಪ್ರೈಮ್‌ ವೀಡಿಯೋ ನಿರ್ಮಿಸುತ್ತಿರುವ ಆಕ್ಷನ್‌-ಸಾಹಸ ಸಿನಿಮಾವನ್ನು ಅಭಿಷೇಕ್‌ ಶರ್ಮಾ ನಿರ್ದೇಶನ ಮಾಡುತ್ತಿದ್ದಾರೆ ಮತ್ತು ಡಾ. ಚಂದ್ರಪ್ರಕಾಶ್ ದ್ವಿವೇದಿ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿದ್ದಾರೆ. ಭಾರತದ ಸೂಪರ್‌ಸ್ಟಾರ್ ಅಕ್ಷಯ್‌ ಕುಮಾರ್‌, ನಟಿ ಜಾಕ್ವೆಲಿನ್ ಫರ್ನಾಂಡಿಸ್‌ ಮತ್ತು ನುಶ್ರತ್‌ ಭರುಚಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇತ್ತೀಚಿನ ಮತ್ತು ಎಕ್ಸ್‌ಕ್ಲೂಸಿವ್ ಸಿನಿಮಾಗಳು, ಟಿವಿ ಶೋಗಳು, ಸ್ಟಾಂಡಪ್‌ ಕಾಮಿಡಿ, ಅಮೆಜಾನ್ ಒರಿಜಿನಲ್‌ ಸಿರೀಸ್‌, ಅಮೆಜಾನ್ ಪ್ರೈಮ್ ಮ್ಯೂಸಿಕ್ ಮೂಲಕ ಜಾಹೀರಾತು ಇಲ್ಲದ ಸಂಗೀತ ಶ್ರವಣ, ಭಾರತದ ಅತಿದೊಡ್ಡ ಉತ್ಪನ್ನಗಳ ಸಂಗ್ರಹದಿಂದ ಉಚಿತ ತ್ವರಿತ ಡೆಲಿವರಿ, ಪ್ರಮುಖ ಡೀಲ್‌ಗಳಿಗೆ ಅವಧಿ ಪೂರ್ವ ಆಕ್ಸೆಸ್‌, ಪ್ರೈಮ್ ರೀಡಿಂಗ್ ಮೂಲಕ ಅನಿಯಮಿತ ಓದುವಿಕೆ ಮತ್ತು ಪ್ರೈಮ್‌ ಗೇಮಿಂಗ್‌ನಲ್ಲಿ ಮೊಬೈಲ್‌ ಗೇಮಿಂಗ್‌ ಕಂಟೆಂಟ್‌ ಎಲ್ಲವನ್ನೂ ಅಮೆಜಾನ್‌ ಪ್ರೈಮ್‌ನಲ್ಲಿ ಕೇವಲ ಮಾಸಿಕ 129 ಕ್ಕೆ ಪಡೆಯಬಹುದು.  

ಮುಂಬೈ, ಭಾರತ, 17 ಮಾರ್ಚ್‌ 2021: ಅಮೆಜಾನ್ ಪ್ರೈಮ್ ವೀಡಿಯೋ ತನ್ನ ಭಾರತದ ಕಾರ್ಯನಿರ್ವಹಣೆಯಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ರಾಮ್‌ ಸೇತು ಹಿಂದಿ ಸಿನಿಮಾಗೆ ಕೇಪ್ ಆಫ್‌ ಗುಡ್ ಫಿಲಮ್ಸ್‌, ಅಬಂಡನ್ಶಿಯಾ ಎಂಟರ್ಟೇನ್ಮೆಂಟ್‌ ಮತ್ತು ಲೈಕಾ ಪ್ರೊಡಕ್ಷನ್ಸ್‌ ಜೊತೆಗೆ ಸಹ ನಿರ್ಮಾಣವನ್ನು ಮಾಡುವುದಾಗಿ ಘೋಷಿಸಿದೆ. ಅಭಿಷೇಕ್‌ ಶರ್ಮಾ (ಪರಮಾಣು, ತೆರೆ ಬಿನ್ ಲಾಡೆನ್‌) ನಿರ್ದೇಶನ ಮತ್ತು ಡಾ. ಚಂದ್ರಪ್ರಕಾಶ್ ದ್ವಿವೇದಿ (ಪೃಥ್ವಿರಾಜ್‌ ಚೌಹಾಣ್‌) ಕ್ರಿಯಾಶೀಲ ನಿರ್ಮಾಣವಿದ್ದು, ಸಿನಿಮಾವು ಆಕ್ಷನ್‌-ಅಡ್ವೆಂಚರ್ ಡ್ರಾಮಾ ವಿಭಾಗದ್ದಾಗಿದೆ. ಇದು ಭಾರತೀಯ ಸಂಸ್ಕೃತಿ ಮತ್ತು ಐತಿಹಾಸಿಕ ಸಂಪ್ರದಾಯವನ್ನು ಆಧರಿಸಿದೆ. ಸಿನಿಮಾದಲ್ಲಿ ಬಹುದೊಡ್ಡ ತಾರಾಗಣವಿದ್ದು, ಸೂಪರ್‌ಸ್ಟಾರ್ ಅಕ್ಷಯ್‌ ಕುಮಾರ್‌ ಮತ್ತು ಜಾಕ್ವೆಲಿನ್‌ ಫರ್ನಾಂಡಿಸ್‌ ಮತ್ತು ನುಶ್ರತ್‌ ಭರುಚಾ ಇದ್ದಾರೆ. ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ನಂತರದಲ್ಲಿ, ರಾಮ ಸೇತು ಶೀಘ್ರದಲ್ಲೇ ಭಾರತದಲ್ಲಿ ಮತ್ತು 240 ಕ್ಕೂ ಹೆಚ್ಚು ದೇಶಗಳ ಪ್ರೈಮ್‌ ಸದಸ್ಯರಿಗೆ ಲಭ್ಯವಾಗಲಿದೆ.

ಅಮೆಜಾನ್ ಪ್ರೈಮ್ ವಿಡಿಯೋದ ನಿರ್ದೇಶಕ ಮತ್ತು ಕಂಟೆಂಟ್‌ ಮುಖ್ಯಸ್ಥ ವಿಜಯ್‌ ಸುಬ್ರಮಣ್ಯನ್‌ ಹೇಳುವಂತೆ, “ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ, ನಾವು ತೆಗೆದುಕೊಳ್ಳುವ ಪ್ರತಿ ನಿರ್ಧಾರವೂ ಗ್ರಾಹಕ ಕೇಂದ್ರಿತ ದೃಷ್ಟಿಕೋನವನ್ನು ಹೊಂದಿರುತ್ತದೆ.ಭಾರತದ ಮಣ್ಣಿನ ಕಥೆಗಳು ಕೇವಲ ಭಾರತದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲೇ ವೀಕ್ಷಕರನ್ನು ಪಡೆದುಕೊಳ್ಳುತ್ತದೆ ಮತ್ತು ನಮ್ಮ ಭಾರತೀಯ ಸಂಪ್ರದಾಯವನ್ನು ಎತ್ತಿಹಿಡಿಯುವ ಸಿನಿಮಾದ ಜೊತೆಗೆ ಸಹಭಾಗಿತ್ವ ಸಾಧಿಸುವ ಮೂಲಕ ನಾವು ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದೇವೆ. ವಿಕ್ರಮ್ ಮಲ್ಹೋತ್ರಾ ಮತ್ತು ಅಬಂಡನ್ಶಿಯಾ ಎಂಟರ್ಟೇನ್‌ಮೆಂಟ್‌ ಮತ್ತು ಅಕ್ಷಯ್‌ ಕುಮಾರ್‌ ಜೊತೆಗೆ ನಮ್ಮ ಸಹಭಾಗಿತ್ವವು ಈವರೆಗೂ ವಿಶಿಷ್ಟವಾಗಿದೆ ಮತ್ತು ಅತ್ಯಂತ ಯಶಸ್ವಿಯಾಗಿದೆ. ಈ ಹೆಜ್ಜೆಯ ಮೂಲಕ, ನಮ್ಮ ಸಹಭಾಗಿತ್ವವನ್ನು ಇನ್ನಷ್ಟು ಆಳವಾಗಿಸುವ ಮತ್ತು ಸಬಲಗೊಳಿಸುವ ನಿಟ್ಟಿನಲ್ಲಿ ಸಾಗುತ್ತಿದ್ದೇವೆ. ಇತಿಹಾಸದ ಮೂಸೆಯಲ್ಲಿ ಅದ್ದಿದಂತಿರುವ ಅಪೂರ್ವವಾದ ತಾರಾಗಣ ಮತ್ತು ಕಥೆಯನ್ನು ಹೊಂದಿರುವ ಈ ಸಿನಿಮಾ ಮೂಲಕ, ನಮ್ಮ ಗ್ರಾಹಕರನ್ನು ಮನರಂಜಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ.” 

ನಟ ಅಕ್ಷಯ್‌ ಕುಮಾರ್‌ ಹೇಳುವಂತೆ “ರಾಮ ಸೇತು ಕಥೆಯು ನನ್ನನ್ನು ಎಂದಿಗೂ ಸ್ಫೂರ್ತಿ ನೀಡಿದೆ. ಇದು ಸಾಮರ್ಥ್ಯ, ಸ್ಥೈರ್ಯ ಮತ್ತು ಪ್ರೀತಿಯನ್ನು ನೀಡಿದೆ ಮತ್ತು ನಮ್ಮ ದೇಶದ ನೈತಿಕ ಮತ್ತು ಸಾಮಾಜಿಕ ರೂಪುರೇಷೆಯನ್ನು ಇದು ವಿಶಿಷ್ಟವಾಗಿ ಕಟ್ಟಿಕೊಟ್ಟಿದೆ.ಹಿಂದಿನ, ಮುಂದಿನ ಮತ್ತು ಪ್ರಸ್ತುತ ತಲೆಮಾರುಗಳ ಮಧ್ಯದ ಸೇತುವೆಯಂತೆ ರಾಮ ಸೇತು ಇದೆ. ಭಾರತೀಯ ಸಂಸ್ಕೃತಿಯ ಮಹತ್ವದ ಕಥೆಯೊಂದನ್ನು ಹೇಳುವಲ್ಲಿ ನಾನು ಭಾಗಿಯಾಗಿದ್ದೇನೆ. ಅದರಲ್ಲೂ ವಿಶೇಷವಾಗಿ ಯುವಕರಿಗೆ ಈ ಕಥೆ ಹೇಳುತ್ತಿರುವ ಬಗ್ಗೆ ನನಗೆ ಖುಷಿಯಿದೆ. ಅಮೆಜಾನ್‌ ಪ್ರೈಮ್ ವೀಡಿಯೋ ಜೊತೆಗೆ ಈ ಕಥೆ ಜಗದಗಲ ಹರಡುತ್ತದೆ ಮತ್ತು ವಿಶ್ವಾದ್ಯಂತದ ವೀಕ್ಷರನ್ನು ಪಡೆಯುತ್ತದೆ.” 

ಈ ಬಗ್ಗೆ ಮಾತನಾಡಿದ ಅಬಂಡನ್ಶಿಯಾ ಎಂಟರ್ಟೇನ್‌ಮೆಂಟ್‌ನ ಸಂಸ್ಥಾಪಕ ಮತ್ತು ಸಿಇಒ ವಿಕ್ರಮ್ ಮಲ್ಹೋತ್ರಾ “ಭಾರತದಲ್ಲಿ ಪುರಾಣ, ಧರ್ಮ ಮತ್ತು ಇತಿಹಾಸವೆಲ್ಲವೂ ಪರಸ್ಪರ ಬೆಸೆದುಕೊಂಡಿವೆ. ಇವು ನಮ್ಮ ದೇಶದ ಬಂಧಗಳು ಮತ್ತು ಇವು ಎಂದಿಗೂ ನಮ್ಮ ಕಥೆ ಹೇಳುವ ಶೈಲಿಯ ಅಡಿಪಾಯವಾಗಿದೆ. ರಾಮ ಸೇತು ಎಂಬುದು ವಾಸ್ತವ, ವಿಜ್ಞಾನ ಮತ್ತು ಇತಿಹಾಸವನ್ನು ಒಳಗೊಂಡ ಕಥೆ. ಇದು ಭಾರತ ಶತಮಾನಗಳಿಂದ ಹೊಂದಿದ ನಂಬಿಕೆಯನ್ನು ಆಧರಿಸಿದೆ. ಅಮೆಜಾನ್ ಪ್ರೈಮ್ ವಿಡಿಯೋದ ಜೊತೆಗೆ ಯಶಸ್ವಿ ಅಮೆಜಾನ್ ಒರಿಜಿನಲ್‌ ಸಿರೀಸ್‌ ಬ್ರೀತ್ ಮತ್ತು ಬ್ರೀತ್‌: ಇಂಟು ದಿ ಶಾಡೋಸ್‌ ಹಾಗೂ ಶಕುಂತಲಾ ದೇವಿ ಮತ್ತು ಅಕ್ಷಯ್‌ ಕುಮಾರ್ ನಟನೆಯ ಮುಂಬರುವ ಟೆಂಟ್‌ಪೋಲ್‌ ಸಿರೀಸ್‌ ದಿ ಎಂಡ್‌ ಮೂಲಕ ಅದ್ಭುತ ಸಂಬಂಧವನ್ನು ಹೊಂದಿದ್ದೇವೆ. ಈ ಅದ್ಭುತ ಕಥೆಯನ್ನು ಹೇಳುವುದಕ್ಕಾಗಿ ಮತ್ತೊಮ್ಮೆ ಅಮೆಜಾನ್ ಜೊತೆಗೆ ಸಹಭಾಗಿತ್ವ ಸಾಧಿಸಲು ನಾನು ಉತ್ಸುಕನಾಗಿದ್ದೇನೆ.” 

ಥಿಯೇಟರ್‌ನಲ್ಲಿ ಬಿಡುಗಡೆಯಾದ ನಂತರ ರಾಮ ಸೇತು ಸಿನಿಮಾಗೆ ಅಮೆಜಾನ್ ಪ್ರೈಮ್ ವೀಡಿಯೋ ಎಕ್ಸ್‌ಕ್ಲೂಸಿವ್‌ ಸ್ಟ್ರೀಮಿಂಗ್‌ ಪಾರ್ಟ್ನರ್ ಆಗಿರಲಿದೆ. 

ABOUT AMAZON PRIME VIDEO

Read Also  ಅಮೆಜಾನ್   ಪ್ರೈಮ್   ವಿಡಿಯೋ   ಜಾಗತಿಕವಾಗಿ   5 ಭಾರತೀಯ   ಭಾಷೆಗಳಲ್ಲಿ   9 ಹೆಚ್ಚು   ನಿರೀಕ್ಷಿತ ಚಲನಚಿತ್ರಗಳನ್ನು   ನೇರವಾಗಿ   ತನ್ನ   ಸೇವೆಯಲ್ಲಿ   ಪ್ರದರ್ಶಿಸುತ್ತದೆ.

Prime Video is a premium streaming service that offers Prime members a collection of award winning Amazon Original series, thousands of movies and TV shows—all with the ease of finding what they love to watch in one place.  Find out more atPrimeVideo.com.

  • Included with Prime Video: These titles will join thousands of TV shows and movies from Hollywood and Bollywood, including Indian produced Amazon Original series such as Four More Shots Please!,The Family Man, Mirzapur, Inside Edge and Made In Heaven, and award-winning and critically acclaimed global Amazon Original series including Tom Clancy’s Jack Ryan, The Boys, Hunters, Fleabag and The Marvelous Mrs. Maisel available for unlimited streaming as part of a Prime membership. Prime Video includes titles available in Hindi, Marathi, Gujarati, Tamil, Telugu, Kannada, Malayalam, Punjabi and Bengali.
  • Instant Access: PrimeMembers can watch anywhere, anytime on the Prime Video app for smart TVs, mobile devices, Fire TV, Fire TV stick, Fire tablets, Apple TV and multiple gaming devices. Prime Video is also available to consumers through Airtel and Vodafone pre-paid and post-paid subscription plans. In the Prime Video app, Prime members can download episodes on their mobile devices and tablets and watch anywhere offline at no additional cost.
  • Enhanced experiences: Make the most of every viewing with 4K Ultra HD- and High Dynamic Range (HDR)-compatible content. Go behind the scenes of your favourite movies and TV shows with exclusive X-Ray access, powered by IMDb. Save it for later with select mobile downloads for offline viewing.
  • Included with Prime: Prime Video is available in India at no extra cost with Prime membership for just ₹999 annually or ₹129 monthly, new customers can find out more at www.amazon.in/prime and subscribe to a free 30-day trial.